-ಪಾಟೀಲ್.ರೋಹಿಣಿ.

ಫ್ರೆಂಚನ್ ಅತ್ಯಂತ ಜನಪ್ರಿಯವಾದ, ಆಲೂಗೆಡ್ಡೆಯಿಂದ ತಯಾರಿಸಿದ ಲಘು ಅಥವಾ ಮೊದಲ ತಿನಿಸು ಉಪ್ಪೇರಿಗಳನ್ನು ಬೆರಳು ಚಿಪ್ಸ್ ಎಂದು ಕರೆಯಲ್ಪಡುತ್ತಾರೆ. ಫಿಂಗರ್ ಚಿಪ್ಸ್ ಬೇಯಿಸಿದ ಪದಾರ್ಥಗಳಿಗಿಂತ ಹೆಚ್ಚು ರುಚಿಕರವಾದ, ದೇಹಕ್ಕೆ ಆರೋಗ್ಯಕರವಾದ ಮತ್ತು ಒಳ್ಳೆಯ ತಿಂಡಿ. ಹೊರಗಡೆ ಗರಿಗರಿಯಾದ ಮತ್ತು ಒಳಗಡೆ ಮೃದುವಾಗಿರುವ ಈ ತಿಂಡಿಯನ್ನು ನೋಡಿದ ಕ್ಷಣವೇ ನಮ್ಮ ಬಾಯಲ್ಲಿ ನಿರೂರುತ್ತದೆ ಬನ್ನಿ ಮನೆಯಲ್ಲಿ ಗರಿಗರಿಯಾದ ಫ್ರೆಂಚ್ ಫಿಂಗರ್ ಚಿಪ್ಸ್ ಹೇಗೆ ತಯಾರಿಸುವುದೆಂದು ತಿಳಿಯೋಣ ಬನ್ನಿ

ಅಡುಗೆ ಮಾಡಲು ಬೇಕಾಗುವ ಸಮಯ : 25 ನಿಮಿಷ

ಬೇಕಾಗುವ ಪದಾರ್ಥಗಳು

  • ಎಣ್ಣೆ-1/2 ಬಾಣಲಿ
  • ಆಲೂಗಡ್ಡೆ -3 ದೊಡ್ಡದು
  • ಅರಿಶಿನ ಪುಡಿ -1 / 4 ಟೀ ಚಮಚ
  • ಮೆಣಸಿನ ಪುಡಿ -ರುಚಿಗೆ ತಕ್ಕಷ್ಟು
  • ಉಪ್ಪು-ರುಚಿಗೆ ತಕ್ಕಷ್ಟು

ದೊಡ್ಡದಾದ ಆಲೂಗೆಡ್ಡೆಯನ್ನು ಸ್ವಚ್ಛವಾಗಿ ತೊಳೆದು ಅವುಗಳ ಸಿಪ್ಪೆಯನ್ನು ಚೆನ್ನಾಗಿ ತೆಗೆಯಿರಿ, ಎಲ್ಲ ಬದಿಗಳಲ್ಲಿಯೂ ಸ್ವಲ್ಪ ಮೊದಲು ಕತ್ತರಿಸಿ ನಂತರ ಆಯತಾಕಾರದ ಆಕಾರದಲ್ಲಿ ಅದನ್ನು ಉದ್ದವಾಗಿ ಹೋಳು ಮಾಡಿಕೊಳ್ಳಿ.ಕೆಳಗೆ ಚಿತ್ರದಲ್ಲಿ ತೋರಿಸಿರುವಂತೆ ಕಿರುಗುದಿ ಹಾಗೆ  ಕತ್ತರಿಸಿ.ನಂತರ್ ಹೋಳು ಮಾಡಿದ ಆಲುಗಡ್ಡೆಯನ್ನು ನೀರಿನಲ್ಲಿ ಇರಿಸಿ.

french fries-1
ನೀರಿನಲ್ಲಿರಿಸಿದ ಆಲೂಗೆಡ್ಡೆ

ಒಂದು ಬಾಣಲೆಯಲ್ಲಿ ನೀರನ್ನು ತೆಗೆದುಕೊಂಡು ಉಪ್ಪು ಮತ್ತು ಅರಿಶಿನ ಪುಡಿ ಹಾಕಿ ಕುದಿಸಿ. ನೀರು ಕುದಿಯಲು ಪ್ರಾರಂಭಿಸಿದಾಗ ಕತ್ತರಿಸಿದ ಆಲೂಗಡ್ಡೆಯನ್ನು ಸೇರಿಸಿ. ಮೃದುವಾಗುವ ತನಕ ಆಲೂಗಡ್ಡೆಗಳನ್ನು ಬೇಯಿಸಿ ಆದರೆ ಅವುಗಳನ್ನು ಮುರಿಯದಂತೆ ಮತ್ತು ಅವು ತಮ್ಮ ಆಕಾರವನ್ನು ಉಳಿಸಿಕೊಳ್ಳುವಂತೆ ಇಡಿ. ಆಲೂಗಡ್ಡೆಯನ್ನು ತುಂಬಾ ಹೊತ್ತು ಬೇಯಿಸಬೇಡಿ ಫ್ರೆಂಚ್ ಫ್ರೈಗಳನ್ನು ಪೂರ್ಣವಾಗಿ ತಯಾರಿಸಲು ಈ ಹಂತವು ಬಹಳ ಮುಖ್ಯ.

french fries-3
ಆಲೂಗಡ್ಡೆ ಬೇಯಿಸುವಿಕೆ

ನಂತರ ಬಾಣಲೆಯಲ್ಲಿನ ನೀರನ್ನು ಸಂಪೂರ್ಣವಾಗಿ ಹೊರ ತಗೆದು, ಕತ್ತರಿಸಿದ ಆಲೂಗಡ್ಡೆಯನ್ನು ಒಂದು ತಟ್ಟೆಯಲ್ಲಿ ಹರಡಿಸಿ ಚೆನ್ನಾಗಿ ಆರಿಸಿ, ಆಥವಾ ಅದನ್ನು ಆರಿಸಲು ಬೀಸಣಿಗೆ ಅಡಿಯಲ್ಲಿ ಇಟ್ಟು ತಂಪಾಗಿಸಿ.

french fries-4
ತಟ್ಟೆಯಲ್ಲಿ ಹರಡಿಸಿದ ಆಲೂಗಡ್ಡೆ

ಒಮ್ಮೆ ಅದು ಸಂಪೂರ್ಣವಾಗಿ ತಂಪಾದ ಮೇಲೆ ಕತ್ತರಿಸಿದ ಆಲೂಗಡ್ಡೆಗಳು ಎಣ್ಣೆಯಲ್ಲಿ ಬೆಯಿಸಲು ಉತ್ತಮ. ಒಂದು ಬಾಣಲೆಯಲ್ಲಿ ತೈಲವನ್ನು ಬಿಸಿ ಮಾಡಿ (ತೈಲವು ಸಾಕಷ್ಟು ಬಿಸಿಯಾಗಿದ್ದರೆ, ಆಲೂಗೆಡ್ಡೆ ಒಳಗೆ ಸಣ್ಣ ತುತು ಮಾಡಿ ಬಾಣಲೆಯಲ್ಲಿ ಹಾಕಿದಾಗ ತಕ್ಷಣವೇ ಮೇಲ್ಮೈಗೆ ಬಂದರೆ ತೈಲವು ಆಲೂಗೆಡ್ಡೆ ಬೆರಳುಗಳನ್ನು ಬೇಯಿಸುವಷ್ಟು ಕಾದಿದೆ ಎಂಬಂತೆ ) ಈಗ ಬಾಣಲೆಯಲ್ಲಿ ಗರಿಗರಿಯಾದ ಗೋಲ್ಡನ್ ಬ್ರೌನ್ ಬಣ್ಣ ಬರುವ ತನಕ ಆಲೂಗೆಡ್ಡೆಯನ್ನು ಬೇಯಿಸಿ.

french fries-5
ಬಾಣಲೆಯಲ್ಲಿ ಬೆಯ್ದ ಹಾಗು ಮೆಣಸಿನ ಪುಡಿ ಸಂಪಡಿಸಿದ ಫಿಂಗರ್ ಚಿಪ್ಸ್

ಅಧಿಕ ತೈಲವನ್ನು ಹೀರಿಕೊಳ್ಳದಂತೆ ತಡೆಯಲು ಕಾಗದದ ಟವಲನಲ್ಲಿ ಫಿಂಗರ್ ಚಿಪ್ಸಗಳನ್ನು ಹರಿಸಿ. ಉಪ್ಪೇರಿಗಳು ಬಿಸಿಯಾಗಿರುವಾಗ, ಮೆಣಸಿನ ಪುಡಿಯನ್ನು ರುಚಿಗೆ ಸಿಂಪಡಿಸಿ ಮತ್ತು ನಿಮ್ಮ ಕೈಗಳಿಂದ ಚೆನ್ನಾಗಿ ಲೇಪನ ಆಗುವಂತೆ ಮಿಶ್ರಣ ಮಾಡಿ.ಗರಿಗರಿಯಾದ ಫ್ರೆಂಚ್ ಹೋಮ್ಮೇಡ್ ಆಲೂಗೆಡ್ಡೆ ಚಿಪ್ಸ್ ಅಡುಬಗೆ ಟೊಮೆಟೊ ಕಿಚಪ್’ನೊಂದಿಗೆ ಬಿಸಿ- ಬಿಸಿಯಾಗಿ ಸೇವಿಸಿ ಸವಿಯಲು ಸಿದ್ದ.

 

(ಚಿತ್ರ;padhuskitchen.com,ytimg.com)

Advertisements