-ಸಂಜಯ್.ದೇವಾಂಗ.

ನೀ ಬರೆದ 
ಮೌನದ ಪತ್ರವ
ನಾ ತಿಳಿಗೆಂಪು ಸಂಜೆಯಲ್ಲಿ 
ಓದಲು ಕುಳಿತೆ

ಸಾಗರದ ತೀರದಲ್ಲಿ
ಆ ಪತ್ರ ಮೌನದ ಧ್ಯಾನವಾಗಿತ್ತು

ನಾ ಉತ್ತರ ಗೀಚುವ ಹೊತ್ತಲ್ಲಿ
ನೀ ಸಾಗರದ ನಡುವೆ ಮುಳುಗುತ್ತಿರುವ 
ಸೂಯ೯ನಂತೆ 
ಕಾಣುತ್ತಿದ್ದೆ

ನಿನ್ನ ಮಾತು ಕೇಳಿದ ಈ ಮನವು ಮೂಕಾಗಿದೆ
ನೀ  ಬರೆದ ಮೌನದ ಕಾಗದ ಬರೀ ಖಾಲಿ ಹಾಳೆಯಂತೆ ಹೊಳೆಯುತ್ತಿದೆ

ಹೃದಯದ ಮ್ಯಾಲೆ
ನಾ ಗಿಚಿದ ಪದಗಳು ಮರೆಯಾಗುವ ಮುಂಚೆ
ಮೌನವ ಮುರಿದು

ಸ್ವರದಿ ಹೃದಯದ ಮಾತನ್ನು ತಿಳಿಸು ನಾ ಕಾದಿರುವೆ 
ನಿನ್ನ ಪ್ರೇಮ ನಿವೇದನೆಗಾಗಿ

 

 

(ಚಿತ್ರ;wallpapermania.eu)

 

Advertisements